Menu

ಶ್ರೀ ಮುರುಘಾಮಠ,
ಚಿತ್ರದುರ್ಗ - 577502
ದೂ. 08194-222250,
ಫ್ಯಾಕ್ಸ್ : 08194-225164
Open:08:00 AM - 1:00PM ,
04:00PM-8:00PM

 

About Vidyapeetha

ಶ್ರೀಮಠದ ಇತಿಹಾಸ

ಶ್ರೀಮಠದ ಪರಂಪರೆಗೆ ೭೬ ಬಿರುದುಗಳು ಅದರಲ್ಲಿ ಮುಖ್ಯವಾದುದೆಂದರೆ ಅಲ್ಲಮಪ್ರಭು ಸ್ವಾಮಿಯ ಎಂಬುದು. ಅಲ್ಲಮ ಒಬ್ಬ ಅಧ್ಯಾತ್ಮ ಮತ್ತು ಅನುಭಾವದ ಮೇರುಪರ್ವತ . ಜಿಜ್ಞಾಸು ಆತನದು ಅಷ್ಟೇ ಚಿಕಿತ್ಸಕ ದೃಷ್ಟಿ ಬಸವಣ್ಣ ಮೊದಲಾದ ಶರಣರು ಅನುಭವ ಮಂಟಪದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿ ತರುತ್ತಾರೆ. ಅನುಭವ ಮಂಟಪವೆಂದರೆ ಅನುಭಾವಿಗಳ ಸಂಗಮ ಮಹಾನ್ ಸಾಧಕರ ಸಂಕುಲ ಸಮಾಜದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತ ಪರಿಹಾರೋಪಾಯಗಳನ್ನು ಕಂಡುಕೊಂಡ ಸಾಮಾಜಿಕ-ಧಾರ್ಮಿಕ ಮತ್ತು ಸೈದ್ಧಾಂತಿಕ ಸಂಘಟನೆ ಈಗಿನ ಯಾವುದೇ ದೇಶದ ಆಡಳಿತದಲ್ಲಿ ಅಧ್ಯಕ್ಷರು ಸಭಾಪತಿಗಳ ಪಾತ್ರ ಮುಖ್ಯವಾಗಿರುವಂತೆ ಅಂದಿನ ಅಹುಭವ ಮಂಟಪದ ಅಧ್ಯಕ್ಷನಾಗಿ ಕಾರ್ಯನಿವಹಿಸಿದ ಕೀರ್ತಿ ಅಲ್ಲಮನದು. ಆತನಿಗೆ ಆ ಸಾಮರ್ಥ್ಯ ಇದ್ದುದರಿಂದಲೇ ಬಸವಣ್ಣನವರು ಆತನಿಗೆ ಆ ಸ್ಥಾನವನ್ನು ನೀಡಿ ಗೌರವಿಸುತ್ತಾರೆ ಚಿತ್ರದುರ್ಗ ಮುರುಘಮಠಕೆ ಇಂಥ ಸೈದ್ಧಾಂತಿಕವಾದ ಹಿನ್ನಲೆ ಅಲ್ಲಮನ ಅನುಭಾದ ಮುಖಾಂತರ ಆಧ್ಯಾತ್ಮಿಕ ಪರಂಪರೆ ಅದನ್ನು ಸ್ಥಾಪಿಸಿದ ಮಾನವತಾವಾದಿ ಬಸವಣ್ಣನವರು ಎಸಗಿದ ಸಮಗ್ರ ಕಲ್ಯಾಣವು ಶೂನ್ಯಪೀಠ ಪರಂಪರೆ ಮತ್ತು ಅದಕ್ಕೆ ನಡೆದುಕೊಳ್ಳುವ ಅನುಯಾಯಿಗಳಿಗೆಲ್ಲ ದೊಡ್ಡ ಆದರ್ಶ ಜ್ಞಾನ ಭಂಡಾರಿ ಬಸವಣ್ಣನವರ ಪರಿವರ್ತನೆಯ ಮಹಾಪರಂಪರೆ.


ಶೂನ್ಯತತ್ವದ ಮುಂದುವರಿಕೆ

ಶೂನ್ಯಪರಂಪರೆಯು ೧೨ನೇ ಶತಮಾನದಲ್ಲಿ ಮೊದಲಗುಂಡಿತದರೂ ನಂತರದ ದಿನಂಗಳಲ್ಲಿ ಅದು ಮಂದಗತಿಯಲ್ಲಿ ಸಾಗುತ್ತ ಬಂದಿದೆ ೧೬ನೇ ಶತಮಾನದಲ್ಲಿ ಆಗಿಹೋದ ತೋಂಟದ ಸಿದ್ಧಲಿಂಗರು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಬಸವಾದಿ ಶರಣರ ತತ್ವಗಳನ್ನು ಪ್ರಚಾರಗೊಳಿಸುತ್ತಾರೆ ಶರಣರ ಪರಂಪರೆಯು ಮುಂದೆ ಮಠ ಪರಂಪರೆ ಅರ್ಥಾತ್ ವಿರಕ್ತ ಪರಂಪರೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈ ತತ್ವವನ್ನು ಪ್ರತಿಪಾದಿಸುವವರು ಒಂದೆಡೆ ನೆಲೆನಿಲ್ಲದೆ ಲೋಕಸಂಚಾರ ಮಾವುತ್ತ ಪ್ರಚಾರಗೈಯ್ಯುತ್ತ ಬಂದಿರುತ್ತಾರೆ ೧೭ನೇ ಶತಮಾಣದ್ಲಲಿ ಮುರಿಗಿಯ ಶಾಂತವೀರರು ಶಿವಯೋಗ ಸಾಧಕರಾಗಿ ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿಯಂತೆ ಸಂಚರಿಸುತ್ತ ಚಿತ್ರಕಲ್ ದುರ್ಗದ ಭಾಗಕ್ಕೆ ಬರುತ್ತಾರೆ. ದನಗಾಯಿ ಭರಮಣ್ಣನಿಗೆ ಆಶೀರ್ವದಿಸುತ್ತಾರೆ ಅದರ ದ್ಯೋತಕವಾಗಿ ಭರಮಣ್ಣನವರು ಈ ಭಾಗದ ಪಾಳೇಗಾರರರಾಗುತ್ತಾರೆ. ತಮಗೆ ಆಶೀರ್ವಾದ ಮಾಡಿದ ಗುರುವನ್ನು ತನ್ನ ಆಸ್ಥಾನಕ್ಕೆ ಬ್ರಮಾವಿಕೊಂಡು ಅವರನ್ನು ಅಲ್ಲೇ ಉಳಿಸಿಕೊಳ್ಳುತ್ತಾರೆ ಸ್ವಾಮಿಗಳಿಗಾಗಿ ೩೬೦ ಅಂಕಣ ಮಠವನ್ನು ಕಟ್ಟಿಕೊವುತ್ತಾನೆ ದೊರೆ ಶಾಂತಿಗೆ ಭಂಗವಾದ ಸಂದರ್ಭದಲ್ಲಿ ಕೆಳಗಿನ ಮಠವನ್ನು ನಿರ್ಮಿಸಿಕೊವುತ್ತಾರೆ. ಈ ಪ್ರಯತ್ನದಿಂದಾಗಿ ಮುರುಗಿಯ ಶಾಂತವೀರರು ಇಲ್ಲಿ ನೆಲೆನಿಲ್ಲುತ್ತಾರೆ ಅಲ್ಲಿಂದೀಚೆಗೆ ಇಪ್ಪತ್ತಕ್ಕು ಹೆಚ್ಚು ಅಧ್ಯಾತ್ಮ ಸಾಧಕರು ಈ ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿರುತ್ತಾರೆ.


325 ಅಡಿ ಎತ್ತರದ ಬೃಹತ್ ಬಸವ ಪುತ್ಥಳಿ - ಇತಿಹಾಸಕ್ಕೆ ಹೊಸ ಸೇರ್ಪಡೆ

ಚಿರ್ತದುರ್ಗದಲ್ಲಿರುವ ಮಹಾಮಠ ಕೋಟೆ-ಕೊತ್ತಲಗಳು ಬುರುಜು ಬತೇರಿಗಳು ಐತಿಹಾಸಿಕ ಪರಂಪರೆಗೆ ಸಾಕ್ಷಿಯಾದ್ರೆ ಮಧ್ಯಕರ್ನಾಟಕ ಪ್ರದೇಶಕ್ಕೆ ಮತ್ತೊಂದು ಇತಿಹಾಸವನ್ನು ಸೇರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅದೆಂದರೆ ಮಹಾಪರಿವರ್ತಕರಾದ ಬಸವಣ್ಣವರ ೩೨೫ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವುದು. ಇದು ಶ್ರೀಮಠದ ಪೈಲಟ್ ಪ್ರಾಜೆಕ್ಟ್ ಆಗಿದ್ದು ಈಗಾಲೇ ಆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬೌದ್ಧಧರ್ಮವು ರಾಷ್ಟ್ರ- ಅಂತಾರಾಸರಿಯಮಟ್ಟದಲ್ಲಿ ಪ್ರಚಾರವಾಗಲು ಅಶೋಕ ಚಕ್ರವರ್ತಿ ಬಿಂದುಸಾರ ಹರ್ಷವರ್ಧನ ಮುಂತಾದ ರಾಜಮಹಾರಾಜರು ನೆರವಾಗಿದ್ದಾರೆ ಆಶ್ರಯ ನೀಡಿದ್ದಾರೆ ವಚನ ಚಳವಳಿಯ ಹರಿಕಾರ ಸ್ತ್ರೀ ವಿಮೋಚಕ ಸಮಾನತೆಯ ಪ್ರತಿಪಾದಕರಾದ ಬಸವಣ್ಣವರಿಗೆ ಬಿಜ್ಜಳನನ್ನು ಹೊರತುಪವಿಸಿದರೆ ಯಾವ ರಾಜಾಶ್ರಯವು ದೊರೆತಿರುವುದಿಲ್ಲ. ರಾಜಶಾಹಿ, ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳು ಬಸವಾದಿ ಶರಣರ ಪ್ರಖರ ವಿಚಾರಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದ್ದರ ಪರಿಣಾಮವಾಗಿ ಅದು ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಬೆಳೆಯಲಿಲ್ಲ ಕಾರಣ ಚಿತ್ರದುರ್ಗ ಮುರುಘಾಮಠದ ಹಿಂಬದಿಯ ಬೆಟ್ಟದ ಮೇಲಿನ ಪ್ರಶಾಂತ ಪರಿಸರದಲ್ಲಿ ಬಸವ ಭಾವೈಕ್ಯ ಕೇಂದ್ರದ ಮುಖಾಂತರ ಜಗತ್ತಿನಾದ್ಯಂತ ಪ್ರಚಾರಪಡಿಸುವ ಉದ್ದೇಶದಿಂದ ಈ ಬೃಹತ್ ಯೋಜನೆಯನ್ನು ಆರಂಭಿಸಲಾಗಿದೆ.
ಬಸವಣ್ಣನವರ ಜನನದಿಂದ ಹಿಡಿಸು ಕೊನೆಯ ದಿನಗಳವರೆಗಿನ ಚಿತ್ರಣವನ್ನು ಕಟ್ಟಿಕೊಡುವುದು ಅದಕ್ಕೆ ಸಂಬಂಧಿಸಿದ ಒಂದು ಮ್ಯೂಸಿಯಮ್ ನಿರ್ಮಿಸುವುದು ಧ್ಯಾನ (ಶಿವಯೋಗ) ಮಂಟಪವನ್ನು ಸ್ಥಾಪಿಸುವುದು ಸುಂದ್ರವಾದ ಉದ್ಯಾನವನ ದ್ವಿಪಥ ರಸ್ತೆ, ಲೇಸರ್ ಶೋ, ಮಕ್ಕಳ ರೈಲು, ಕೇಬಲ್ ಕಾರ್, ಬಸವ ಚಾನಲ್ ಆರಂಭಿಸುವುದು ವಚನಗಳನ್ನು ಮತ್ತು ಶರಣರ ಜೀವಾನಗಾಥೆಯನ್ನು ಪ್ರಭಾಷೆಗಳಿಗೆ ಅನುವಾದ ಮಾಡಿಸುವುದು ಮುಂತಾದವುಗಳು ಈ ಯೋಜನೆಯಲ್ಲಿ ಅಡಗಿವೆ. ಈ ಮಹತ್ತರವಾದ ಯೋಜನೆಗೆ ಮಠ-ಮಹಾಂತಿವರು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವವರು, ಸಂಸದರು, ಶಾಸಕರಲ್ಲದೆ ಉಳಿದ ಜನಪ್ರತಿನಿಧಿಗಳು, ಸರ್ವಾಜನಿಕರು, ಬಸವ ಭಕ್ತರು ಉದಾರವಾಗಿ ಧನಸಹಾಯ ಮಾಡಿ ಯೋಜನೆಯು ಪೂರ್ಣಗೊಳ್ಳಲು ಸಹಕರಿಸಬೇಕೆಂದು ನೀವುಗಳೇ ಈ ಬಸವಾದಿ ಪ್ರಮಥರ ಕಾರ್ಯಕ್ಕೆ ಆಶ್ರಯದಾರತರಾಗಬೇಕೆಂದು ಕಳಕಳಿಯ ವಿನಂತಿ ಬಾಹುಬಲಿಯ ಬೃಹತ್ ಮೂರ್ತಿಯನ್ನು ನಿಲ್ಲಿಸುವುದರ ಮೂಲಕ ಅದು ವಿಶ್ವವಿಖ್ಯಾತವಾಯಿತು. ನಮ್ಮ-ನಿಮ್ಮ ಕಾಲದಲ್ಲಿ ಒಂದು ಹೊಸ ಇತಿಹಾಸ ನಿರ್ಮಾಣವಾಬೇಕಾಗಿದೆ. ಅನೇಕರು ಈ ಯೋಜನೆಗೆ ಕೈಲಾದ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ತಾವುಗಳು ಕೊಡುವುದು ತಮಗೆ ಬೇಕಾದವರಿಂದಲು ಕೊಡಿಸಬಹುದು. ಯಾವುದೇ ನೌಕರರು ತಮ್ಮ ಒಂದುದಿನದ ವೇತನವನ್ನು ನೀಡಿ ಸಹಕರಿಸಹುದು. ಇದೊಂದು ಸುವರ್ಣ ಅವಕಾಶವೆಂದು ಭಾವಿಸಿ, ನಿಮ್ಮ ಬಳಿ ಬರಲಾಗಿದೆ. ಈ ಬಸವ ಜೋಳಿಗೆಗೆ ಉದಾರವಾಗಿ ದೇಣಿಗೆ ನೀಡಿ ಸಹಕರಿಸಿರಿ

325 ಅಡಿ ಎತ್ತರದ ಬೃಹತ್ ಬಸವ ಪುತ್ಥಳಿ ಯೋಜನೆಗೆ ಉದಾರವಾಗಿ ದೇಣಿಗೆ ನೀಡಿ ಸಹಕರಿಸಿ.

ಈ ಯೋಜನೆಗೆ ಒಂದು ಟ್ರಸ್ಟ್ ಇದ್ದು ಕೆಳಕಂಡ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
ತಾವುಗಳು ಚೆಕ್, ಡಿಡಿ ಮುಖಾಂತರವಾಗಿ ತಮ್ಮ ಅಮೂಲ್ಯವಾದ ದೇಣಿಗೆಯನ್ನು ಕಳಿಸಬಹುದಾಗಿದೆ.
ಶ್ರೀ ಮುರುಘಾಮಠ, ಚಿತ್ರದುರ್ಗ - 577 502, ದೂ. 08194-222250, ಫ್ಯಾಕ್ಸ್ : 08194-225164

ಬ್ಯಾಂಕ್ ಖಾತೆ ವಿವರ
ಡಾ. ಶಿವಮೂರ್ತಿ ಮುರುಘಾ ಶರಣರು
ಆಕ್ಸಿಸ್ ಬ್ಯಾಂಕ್ ಚಿತ್ರದುರ್ಗ, ಚಾಲ್ತಿ ಖಾತೆ ನಂ. 914020056815810
ಎಎಫ್ ಎಸ್ ಸಿ ಕೋಡ್ 0001019


ಹೊಸರೂಪು ಧರಿಸಿರುವ ಮುರುಘವನ

ಬಸವಜಯಂತಿಯ ಶತಮಾನೋತ್ಸವದ ಪ್ರಸ್ತುತ ವರ್ಷದಲ್ಲಿ ಶ್ರೀ ಮುರುಘಾಮಠವು ಮಾಡುತ್ತಿರುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಮುರುಘಾವನವನ್ನು ನವೀಕರಣಗೊಳಿಸುವುದು ಒಂದು ಹಿಂದೆ ಚಿದಾರಣ್ಯವೆಂದು ಕರೆಸಿಕೊಳ್ಳುತ್ತಿದ್ದ ಪ್ರದೇಶವಾಗಿತ್ತು. ಆದರೆ ಕ್ರಮೇಣ ಅಲ್ಲಿ ದೇಶ ವಿದೇಶಗಳ ವೈವಿಧ್ಯಮಯ ಗಿಡ ಮರ ಬಳ್ಳಿಗಳನ್ನು ನೆಟ್ಟು ಬೆಳೆಸಿ ಮನೋಹರವಾದ ಸಸ್ಯೋಧ್ಯಾನವನ್ನಾಗಿ ಮಾಡಲಾಯಿತು. ಪ್ರಸ್ತುತ ಈ ವನದಲ್ಲಿ ಅದಿ ಮಾನವನಿಂದ ಆಧುನಿಕ ಮಾನವರವರೆಗಿನ ವಿಕಾಸದ ಚಿತ್ರಣ, ಪ್ರಖ್ಯಾತ ದಾರ್ಶನಿಕರು, ಶಿವಶರಣರು, ವಿರವಂತೆಯರು, ಕಾಯಕ ಗ್ರಾಮ, ಚಿತ್ರದುರ್ಗ ಕೋಟೆಯ ಪ್ರತಿರೂಪ, ಅನುಭವ ಮಂಟಪ, ಧರ್ಮಗುರುಗಳು, ಪ್ರಾಣಿ ಸಂಕುಲ, ಜೈವಿಕ ವಿಕಾಸ, ಕೃಷಿ ಲೋಕ, ದಂಡಿ ಸತ್ಯಾಗ್ರಹ, ಬಸವ ಕಲ್ಯಾಣ ಮೊದಲಾದವುಗಳ ಸಜೀವ ರೂಪಿ ರಮಣೀಯವಾದ ಪುತ್ಥಳಿಗಳನ್ನು ನೆಲೆಗೊಳಿಸಿ ಮುರುಘವನಾದ ಸೌಂದರ್ಯವನ್ನು ನೂರ್ಮುಡಿಗೊಳಿಸಲಾಗಿದೆ . ಇವುಗಳ ಜೊತೆಗೆ ಸಜೀವ ಪಶು -ಪಕ್ಷಿ, ಪ್ರಾಣಿಗಳು ಮಕ್ಕಳ ಕ್ರೀಡಾಪರಿಕರಗಳು ಮೊದಲಾದವುಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಅಲ್ಲಲ್ಲಿ ಲತಾಕುಂಜಗಳು, ಹವಾಕುಟೀರಗಳು, ಮರಗಳ ಸುತ್ತ ನಿರ್ಮಿಸಿರುವ ವಿಶ್ರಾಂತಿ ಕಟ್ಟೆಗಳು ಮೊದಲಾದವುಗಳಿಂದ ಕೂಡಿರುವ ಮುರುಘಾವನವು ಇಂದು ಸ್ಥಳ ಪರಸ್ಥಳಗಳ ಪ್ರವಾಸಿಗಳಿಗೆ ಒಂದು ಪ್ರೇಕ್ಷಣೀಯ ಹಾಗೂ ವಿಹಾರ ತಾಣವಾಗಿ ಜನಾಕರ್ಷಣೆಯ ಕೇಂದ್ರವಾಗಿದೆ. ಈ ನವೀಕರಣವು ಬಸವಜಯಂತಿಯ ಶತಮಾನೋತ್ಸವಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.


ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪುರಸ್ಕೃತರು

ಶರಣರು ಸಿದ್ಧರಾಮ ಬೆಲ್ದಾಳ್ ಶರಣರು - ೧೯೯೭
ಶರಣ ದಿ. ಡಾ. ಹಿರೇಮಲ್ಲೂರು ಈಶ್ವರನ್ - ೧೯೯೮
ಶರಣ ಡಾ. ಹೆಚ್ ಸುದರ್ಶನ್ - ೧೯೯೯
ಶರಣ ಶ್ರೀ ಅಣ್ಣಾಹಜಾರೆ - ೨೦೦೦
ಶರಣೆ ಮೇಧಾ ಪಾಟ್ಕರ್ - ೨೦೦೧
ಶರಣ ದಲಾಯಿ ಲಾಮ - ೨೦೦೨
ಶರಣ ಗದ್ದರ್ - ೨೦೦೩
ಶರಣೆ ಡಾ. ವಂದನಾಶಿವ - ೨೦೦೪
ಶರಣ ಸುಭಾಷ್ ಪಾಳೇಕರ್ - ೨೦೦೫
ಶರಣೆ ಶಬಾನಾ ಅಜ್ಮಿ - ೨೦೦೬
ಶರಣ ಸ್ವಾಮಿ ಅಗ್ನಿವೇಶ್ - ೨೦೦೭
ಶರಣ ಡಾ. ಕಿರಣ್ ಬೇಡಿ - ೨೦೦೮
ಶರಣೆ ಪಿ.ಟಿ.ಉಷಾ - ೨೦೦೯
ಶರಣ ಡಾ. ಎ. ಟಿ. ಆರ್ಯರತ್ನ - ೨೦೧೦
ಶರಣ ಪ್ರೊ. ನಂಜುಂಡಸ್ವಾಮಿ (ಮರಣೊತ್ತರ) - ೨೦೧೧
ಶರಣ ಶಂಕರಬಿದರಿ - ೨೦೧೨
ಶರಣ ಡಾ. ಎನ್. ಆರ್. ನಾರಾಯಣಮೂರ್ತಿ
ಮತ್ತು ಶ್ರೀಮತಿ ಸುಧಾಮೂರ್ತಿ - ೨೦೧೩
ಶರಣೆ ಕು. ಮಲಾಲಾ ಯೂಸಾಫ್ ಜಾಯ್ -೨೦೧೪
ಶರಣ ಡಾ. ಎಂ. ಎಂ. ಕಲಬುರ್ಗಿ (ಮರಣೊತ್ತರ) - ೨೦೧೫

ಶ್ರೀ ಮುರುಘರಾಜೇಂದ್ರ ವಸ್ತು ಸಂಗಹಳದ ಒಂದು ವೈಶಿಷ್ಟತೆ

ಚಿತ್ರದುರ್ಗ ನಾಡನ್ನು ೧೧ ಜನ ಪಾಳೆಯಗಾರರು ಸುಮಾರು ೨೧೧ ವರೆಗೆ ಆಳ್ವಿಕೆ ಮಾಡಿರುವುದನ್ನು ಇತಿಹಾಸವು ಸ್ಪಷವಾಗಿ ತಿಳಿಸುತ್ತದೆ. ಇವರಲ್ಲಿ ಶೂರನು ದೀನದಲಿತರಿಗೆ ಆಶ್ರಯದಾತನೂ ಎಡಿಎ ಬಿಚ್ಚುಗತ್ತಿ ಭರಮಣ್ಣನಾಯಕನು ಒಬ್ಬನಾಗಿದ್ದಾನೆ. ಈತನು ತನ್ನ ಗುರುಗಳಾದ ಶ್ರೀಮುರುಘಾರಾಜೇಂದ್ರ (ಶಾಂತವೀರಸ್ವಾಮಿಗಳು) ಯತಿವರ್ಯರಿಗೆ ಚಿತ್ರದುರ್ಗದಲ್ಲಿ ಭವ್ಯವಾದ ಒಂದು ಕಲ್ಲು ಮಠದಲ್ಲಿ ಸುಮಾರು ವರ್ಷಗಳಿಂದ ಸತತವಾಗಿ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸುತ್ತಾ ಬರಲಾಗಿದೆ. ಈಗೀನ ಪೀಠಾಧಿಪತಿಗಳಾದ ಡಾ. ಶ್ರೀ ಶಿವಮೂರ್ತಿ ಮುರುಘಾಶರಣರು ದೇಶವಿದೇಶಗಳಲ್ಲಿ ಸಂಚರಿಸಿ ಸಂಗ್ರಹಿಸಿ ತಂದಿರುವ ಪ್ರಾಚ್ಯವಸ್ತುಗಳ ಸಂಖ್ಯೆ ಇನ್ನೂ ಅಪಾರವಾಗಿದೆ. ಇವುಗಳ ಸೂಕ್ತ ರಕ್ಷಣೆ ಮತ್ತು ನಶಿಸಿ ಹೋದ ಸಂಸ್ಕೃತಿಯನ್ನು ಪುನಃ ತೋರ್ಪಡಿಸಲು ಒಂದು ವಸ್ತು ಸಂಗ್ರಹಾಲಯದ ಸ್ಥಾಪನೆ ಅಗತ್ಯವಾಗಿ ಆಗಬೇಕೆಂದು ಪೂಜ್ಯಾಶರಣರು ನಿರ್ಧರಿಸಿದರು. ಅವರ ನಿರ್ಧಾರ ಮತ್ತು ಅಭಿಲಾಷೆಯ ಮೇರೆಗೆ ವಸ್ತು ಸಂಗ್ರಹಾಲಯವನ್ನು ಪ್ರಾಂಭಿಸಲಾಯಿತು ಈ ಸಂಗ್ರಹಾಲಯದಲ್ಲಿ ವಿವಿಧ ಅಸಂಖ್ಯಾತ ಪ್ರಾಚ್ಯವಸ್ತುಗಳು ಇರುವುದರಿಂದ ವೀಕ್ಷಕರಿಗೆ ವೀಕ್ಷಿಸಲು ಅನುಕೂಲವಾಗುವ ಹಾಗೆ ವಿಭಾಗಗಳನ್ನಾಗಿ ಮಾಡಲಾಗಿದೆ. ಬೆಳ್ಳಿಯ ಲೋಹದ ಪಲ್ಲಕ್ಕಿ, ಅಂಬಾರಿ, ಸಿಂಹಾಸನ, ದಂಡಿಗೆಗಳು, ಬಹಳ ಪ್ರಮುಖ ತಾಮ್ರಲೋಹದ ಶಿಲ್ಪಗಳಲ್ಲಿ ಶಿವಪಾರ್ವತಿ ಮತ್ತು ನಂದಿ ಹಸು-ಕರು ವಿಶಿಷ್ಟ ರೀತಿಯ್ ಪೀಠಗಳು ಇಗಲ್ಲು ತಮ್ಮ ಆಕರ್ಶಣೆಗಳನ್ನು ಕಾಯ್ದುಕೊಂಡು ಬರುತ್ತವೆ. ಇನ್ನು ಪಂಚಲೋಹ ವಸ್ತುಗಳಲ್ಲಿ ಶಿವಪಾರ್ವತಿಯೊಂದಿಗೆ ಗಣೇಶನು ಕುಳಿತಿರುವ ಶಿಲ್ಪ, ದುರ್ಗಾದೇವಿ, ಸರಸ್ವತಿ, ಲಕ್ಷ್ಮೀ. ವಿಷ್ಣು, ಲಕ್ಷ್ಮೀನರಸಿಂಹ, ಭಾತಂಗಿಯಲ್ಲಿರುವ ಕುದುರೆಗಳು, ಚಲಿಸುವ ಭಂಗಿಯಲ್ಲಿರುವ ಆನೆಗಳು, ವಿವಿಧ ಗಾತ್ರದ ಪೆಟ್ಟಿಗೆಗಳು ಧ್ಯಾನಸ್ಥ ಬುದ್ದನು, ಹೂಜಿಗಳು, ವೀರಾಂಜಿನೇಯ ಮುಂತಾದ ಶಿಲ್ಪಗಳು ಪ್ರಾಚೀನತೆಗೆ ಹೆಸರಾಗಿವೆ. ಈ ಸಂಗ್ರಹಾಲಯದಲ್ಲಿರುವ ಕಲ್ಲಿನ ಶಿಲ್ಪಗಳಲ್ಲಿ ಗಣಪತಿ, ವೀರಗಲ್ಲು ಮಸ್ತಿಗಲ್ಲು, ನಂದಿ ಸಪ್ತಮಾತೃಕೆಯರು, ವಿಷ್ಣು, ದುರ್ಗಾ ಕಾಳಿಕಾ ಮುಂತಾದವುಗಳು ನೋಟಕರ ಮನಸ್ಸನ್ನು ಸೆಳೆಯುತ್ತಿರುವಂತೆ ಕಾಣುತ್ತವೆ. ಕ್ರಿ. ಶ ೧-೨ ಮತ್ತು ೧೫-೧೬ನೇ ಶತಮಾನದ ನಾಣ್ಯಗಳಲ್ಲಿ ಶಾತವಾಹನರ, ವಿಜಯನಗರ ಮತ್ತು ಮುಸ್ಲಿಂ ಆಳ್ವಿಕೆಯ ನಾಣ್ಯಗಳು ಪ್ರಮುಖವಾಗಿವೆ. ಕ್ರಿ.ಶ ೧೭-೧೮ನೇ ಶತಮಾನದ ತಾಳೆಯಗರಿ, ಹಸ್ತಪ್ರತಿಗಳು ಮತ್ತು ಇತರೆ ಕಾಗದ ಕಡತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಸ್ತು ಸಂಗ್ರಹಾಲಯಗಳು, ಕಲೆ ಮತ್ತು ಸಂಸ್ಕೃತಿಯ್ನನು ರಕ್ಷಿಸುವ ದೊಡ್ಡ ಉಗ್ರಾಣಗಳೆಂದು ಹೇಳಬಹುದು ಈಗ ಇವು ವಿದ್ಯಾರ್ಜನೆಯ ಸ್ಥಳವಾಗಿ ಜ್ಞಾನದ ಭಂಡಾರಗಳಾಗಿ, ಸಂಶೋಧನೆಯ ಕೇಂದ್ರಗಳಾಗಿ ಕಾರ್ಯನಿವಹಿಸುತ್ತಿವೆ.

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ಗುರುಪರಂಪರೆ

ಕರ್ನಾಟಕ ಧಾರ್ಮಿಕ ಇತಿಹಾಸದಲ್ಲಿ ಒಂದು ಉಜ್ಜ್ವಲ ಹೆಸರು ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಮಹಾಸಂಸ್ತಾನದ್ದು ಮೂರು ಶತಮಾನಗಳಿಗೂ ಹೆಚ್ಚಿನ ಗಣ್ಯ ಗುರುಪರಂಪರೆಯನ್ನು ಹೊಂದಿ ಸಾಗಿಬಂದಿರುವ ಇದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಮಠದ ಇತಿಹಾಸವು ವಿಸ್ತಾರವಾಗಿದ್ದು, ಹನ್ನೆರಡನೆಯ ಶತಮಾನದ ಹಿರಿಯ ಶರಣರಾದ ಅಲ್ಲಮಪ್ರಭು ಚೆನ್ನಬಸವಣ್ಣನವರಿಂದ ಸಾಗಿಬಂದ ತರುವಾಯ 'ಶೂನ್ಯಪೀಠ' ಎಂದು ಹೆಸರಿಸಲಾಗಿದೆ. ಶರಣರು ಪ್ರತಿಪಾದಿಸಿದ ಶೂನ್ಯತತ್ತ್ವದ ಮಾರ್ಗದಲ್ಲಿ ಬಂದದ್ದೆನ್ನುವ ಅರ್ಥದಲ್ಲಿ ಆ ಹೆಸರು ಅದಕ್ಕೆ ಸಲ್ಲುತ್ತದೆ. ಈ ಪೀಠ ಪರಂಪರೆಯಲ್ಲಿ ಅಲ್ಲಮಪ್ರತಭು ಚೆನ್ನಬಸವಣ್ಣ, ಸಿದ್ದರಾಮೇಶ್ವರ, ಅನಾದಿ ಗಣನಾಥ, ಅದಿಗಣೇಶ್ವರ, ನಿರ್ಮಾಯ ಗಣೇಶ್ವರ, ನಿರನ್ಜನಾ ಸ್ವಾಮಿಗಳು, ಜ್ಞಾನಾನಂದ ಸ್ವಾಮಿಗಳು, ಆತ್ಮ ಗಣನಾಥ ಅಧ್ಯಾತ್ಮ ಗಣನಾಥ, ರುದ್ರಮುನಿ (ನಾಯಕನಹಟ್ಟಿ ತಿಪ್ಪೇರುದ್ರ) ಸ್ವಾಮಿಗಳು, ಬಸವಪ್ರಭು ಸ್ವಾಮಿಗಳು, ಆದಿಲಿಂಗ ಸ್ವಾಮಿಗಳು, ಚೆನ್ನವೀರ ಸ್ವಾಮಿಗಳು, ಗೋಸಲ ಸಿದ್ದೇಶ್ವರ ಸ್ವಾಮಿಗಳು, ಶಂಕರೇಶ್ವರ ಸ್ವಾಮಿಗಳು, ದಿವ್ಯಾಲಿಂಗೇಶ್ವರ ಸ್ವಾಮಿಗಳು, ಗೋಸಲ ಚನ್ನಬಸವೇಶ್ವರ ಸ್ವಾಮಿಗಳು, ತೋಂಟದ ಸಿದ್ದಲಿಂಗ ಸ್ವಾಮಿಗಳು, ನಿರಕ್ಷರ ಬೋಳಬಸವೇಶ್ವರ ಸ್ವಾಮಿಗಳು, ಗುಮ್ಮಳಾಪುರದ ಸಿದ್ದಲಿಂಗ ಸ್ವಾಮಿಗಳು, ಗೂಳೂರು ಸಿದ್ಧವೀರ ಸ್ವಾಮಿಗಳು, ಗಗನದಾರ್ಯ ಸ್ವಾಮಿಗಳು, ಕೆಟ್ಟಿಗೇಹಳ್ಳಿ ಸಿದ್ದಲಿಂಗ ಸ್ವಾಮಿಗಳು, ಮುರಿಗೆ ಶಾಂತವೀರ (=೧ನೆಯ ಮುರಿಗೆ) ಸ್ವಾಮಿಗಳು - ಹೀಗೆ ಸಾಗಿ ಬಂದಿರುವಂತೆ ತಿಳಿದುಬರುತ್ತದೆ. ಇವರಲ್ಲಿ ಕೆಲವರು ವಚನಗಳನ್ನು ಇನ್ನು ಕೆಲವರು ಶೂನ್ಯಸಂಪಾದನೆಯಂಥ ಗ್ರಂಥಗಳನ್ನು ಮತ್ತೆಕೆಲವರು ಕೆಲವು ಲಘು ಕೃತಿಗಳನ್ನು ಬರೆದವರು ಇದ್ದಾರೆ. ಆ ಕುರಿತ ಐತಿಹಾಸಿಕ ಅಂಶ ಏನೇ ಇದ್ದರೂ ಚಿತ್ರದುರ್ತದಲ್ಲಿ ಮುರಿಗೆ ಮಠದ ಸ್ಥಾಪನೆಗೆ ಕಾರಣರಾದವರು ಮುರಿಗೆ ಶಾಂತವೀರ (=೧ನೆಯ ಮುರಿಗೆ) ಸ್ವಾಮಿಗಳು. ಇಲ್ಲಿ ಈ ಮತ ಸ್ಥಾಪನೆಗೊಳ್ಳಲು ಒಂದು ಕುತೂಹಲಕರ ಹಿನ್ನೆಲೆಯೊಂದು ವಾಡಿಕೆಯಲ್ಲಿದೆ ಚಿತ್ರದುರ್ಗ ಪ್ರಾಂತದ ಬಿಳಿಚೊದು ಗ್ರಾಮದ ದಾನ ಕಾಯುವ ಹುಡುಗನೊಬ್ಬ ಒಮ್ಮೆ ಅಡವಿಯಲ್ಲಿ ಡ್ನಗಳನ್ನು ಮೇಯಲು ಬಿಟ್ಟು ನೆಲದ ಮೇಲೆ ಮಲಗಿದ್ದಾಗ ನಗರಹಾವೊಂದು ಬಂದು ಅವನ ತಲೆಗೆ ಹೆಡೆಯಾಗಲಿಸಿ ನೆರಳು ಮಾಡಿತೆಂದೂ ಆಗ ಅಲ್ಲಿಗೆ ಬಂಡ ಮುರಿಗೆ ಶಾಂತವೀರ ಸ್ವಾಮಿಗಳು ಅವನನ್ನು ಎಬ್ಬಿಸಿ ನಿನ್ನ ಮೇಲೆ ಶಿವನ ಕೃಪೆಯಾಗಿದೆ ನೀನು ದುರ್ಗದ ದೊರೆಯಾಗುತ್ತೀಯ ಎಂದು ಆಶೀರ್ವಾದ ಮಾಡಿ ಹೊದರೆಂದೂ ಅದರಂತೆ ಮುಂದೆ ಅವನು ಚಿತ್ರದುರ್ಗದ ದೊರೆಯಾದನೆಂದು ಆ ಐತಿಹ್ಯ ಹೇಳುತ್ತದೆ. ೧೬೮೯ರಲ್ಲಿ ದೊರೆಯದ ಭರಮಣ್ಣ ನಾಯಕ ಮೇಲುದ್ರ್ಗದಲ್ಲಿ ಮತ ಕಟ್ಟಿಸಿ ಸ್ವಾಮಿಗಳನ್ನು ಅಲ್ಲಿಗೆ ಬರಮಾಡಿಕೊಂಡರೂ ಸ್ವಾಮಿಗಳ ಇಚ್ಚೆಯಂತೆ ಮತ್ತೆ ಅವನು ಬೆಟ್ಟದ ಕೆಳಗೂ ಒಂದು ಮತವನ್ನು ಕಟ್ಟಿಸಿಕೊಟ್ಟನು. ಅಲ್ಲಿ ಸ್ಫವಮಿಗಳು ೧೭೦೩ ರ ಜುಲೈ ೫ ರಂದು ಲಿಂಗೈಕ್ಯರಾದರು. ಅವರ ಐಕ್ಯಸ್ಥಳ ಈಗ 'ಕತೃಗದ್ದಿಗೇ' ಎಂದು ಕೆರೆಯಲ್ಪಡುತ್ತಿದೆ. ಆಗಿನಿಂದ ಆ ಮತ 'ಮುರಿಗೆ ಮಠ' ಎಂಬ ಹೆಸರನ್ನು ಹೊಂದಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು.

ಚಿತ್ರದುರ್ಗಕ್ಕೆ ಬರುವ ಹೊತ್ತಿಗೆ, ಹತ್ತಿರ ಹತ್ತಿರ ಶತಾಯುಷಿಗಳಾಗಿದ್ದ ಮುರಿಗೆ ಶಾಂತವೀರ ಸ್ವಾಮಿಗಳು ಹಿಂದೆ ಧರ್ಮ ಸಂಚಾರದಲ್ಲಿದ್ದಾಗ ಮಹಾರಾಷ್ಟ್ರದ ಶಿವಾಜಿಯೂ ಸೇರಿದಂತೆ ಅನೇಕ ಪ್ರಾಂತಳ ದೊರೆಗಳು ದೇಸಾಯರು, ನವಾಬರು, ಎಲ್ಲ ಜನಾಂಗದ ಪ್ರಜೆಗಳು ಅವರನ್ನು ಭಕ್ತಿ ಗೌರವಗಳಿಂದ ಕಂಡಿದ್ದರು. ಅವರು ಅನೇಕ ಪ್ರೌಢಕಾವ್ಯಗಳನ್ನು ತತ್ತ್ವ ಕೃತಿಗಳನ್ನು ರಚಿಸಿದ್ದಾರೆ.
ಅವರ ಉತ್ತರಾಧಿಕಾರಿಯಾಗಿ ಬಂಡ ಗುರುಸಿದ್ಧ ಸ್ವಾಮಿಗಳು ಇಮ್ಮಡಿ (ಅಥವಾ ಎರಡನೆಯ) ಮುರಿಗೆ ಸ್ವಾಮಿಗಳೆಂದೇ ಪ್ರಸಿದ್ದರು. ಇವರು ದ್ರಗಡ ದೊರೆಗಳಾಗಿದ್ದ ಭರಮಣ್ಣನಾಯಕ (೧೬೮೯-೧೭೨೧) ಮತ್ತು ಹಿರೇಮದಕರಿ ನಾಯಕ (೧೭೨೧-೧೭೪೮) ಇವ್ರ ಕಾಲದಲ್ಲಿ ರಾಜಗುರುಗಳಾಗಿ ಸೆವೆತರಾಗಿದ್ದರು. ಇವರು ಸಹ ಅನೇಕ ಪ್ರೌಢ ಕಾವ್ಯಗಳನ್ನು ಇತರ ಲಘುಕೃತಿಗಳನ್ನು ರಚಿಸಿದ್ದಾರೆ. ಕೆಳದಿಯ ದೊರೆ ಇಮ್ಮಡಿ ಸೋಮಶೇಖರ ನಾಯಕ ಇವರನ್ನು ಕೆಳದಿ ಸಂಸ್ತಾನದಲ್ಲಿರಲು ಆಹ್ವಾನಿಸಿದ್ದನ್ನು ಇವರು ನಿರಾಕರಿಸಿ ದುರ್ಗದಲ್ಲೇ ಉಳಿದರು. ಆ ಹೊತ್ತಿಗೆ ದೇಶಾದ್ಯನಂತ ನೂರಾರು ಮುರಿಗೆ ಶಾಖಾ ಮಠಗಳು ವಿರಕ್ತಮಠಗಳು ಪ್ರಾರಂಭವಾದುವು.
ಇವರಾದ ಮೇಲೆ ಅನುಕ್ರಮವಾಗಿ ಬಂದವರು ಸ್ವಾದಿ ಚೆನ್ನಬಸವ ಸ್ವಾಮಿಗಳು ಮತ್ತು ಶಿರಹಟ್ಟಿ ಸಿದ್ದಲಿಂಗ ಸ್ವಾಮಿಗಳು ಇವರ ತರುವಾಯ ಬಂದವರು ನಾಯಕನಹಟ್ಟಿ ( ಅಥವಾ ದೊಡ್ಡ) ಗುರುಪಾದ ಸ್ವಾಮಿಗಳು ಇವರ ಅವಧಿಯಲ್ಲಿ ದುರ್ಗದ ಅರಸ ಕೊನೆಯ ಮಾದರಿನಾಯಕ್ನೊಡನೆ (೧೭೫೪-೧೭೭೯) ಆದ ವಿರಸದ ಅಸಂಧಾನದಿಂದ ಇವರು ದುರ್ಗವನ್ನು ತೊರೆದು ದೂರದ ಗುರುಮಠಕಲ್ಲಿಗೆ ಹೋಗಿ ಅಲ್ಲೇ ಇದ್ದು ಐಕ್ಯವಾದರು. ತರುವಾಯದಲ್ಲಿ ಬಂದ ಮೂರು ಸಾವಿರದ (ಅಥವಾ ಸಣ್ಣ) ಗುರುಪಾದ ಸ್ವಾಮಿಗಳು ೧೭೭೯ ರಲ್ಲಿ ಚಿತ್ರದುರ್ಗವನ್ನು ಹೈದರಾಲಿ ವಶಪಡಿಸಿಕೊಂಡ ಕಾಲಕ್ಕೆ ಶ್ರೀಮಠದಲ್ಲಿ ಐಕ್ಯವಾದರು.
ಅವರಾದಮೇಲೆ ಮೂರೂ ಸಾವಿರದ ಸಿದ್ಧಲಿಂಗಸ್ವಾಮಿಗಳು ಪೀಠಾಧೀಶರಾದರು ತರುವದಲ್ಲಿ ಒಪ್ಪೊತ್ತಿನ ಚೆನ್ನವೀರಸ್ವಾಮಿಗಳು ಪಟ್ಟವಾಗಿ ಬಂದು ಮಠದ ವ್ಯವಸ್ಥೆಗಿಂತ ಆಧ್ಯಾತ್ಮಿಕ ಸಾಧನೆಗೆ ಹೆಚ್ಚು ಮನಸ್ಸು ಕೊಟ್ಟು ಶಿವಯೋಗದ ಮೂಲಕ ಐಕ್ಯರಾದರು. ತರುವಾಯದಲ್ಲಿ ಅನುಕ್ರಮವಾಗಿ ವ್ಯಕ್ರ್ಣದ ಸಿದ್ಧಲಿಂಗಸ್ವಾಮಿಗಳು ನೈಘಂಟಿನ ಸಿದ್ಧಬಸವ ಸ್ಫವಮಿಗಳು ಶ್ರೀಮಠದ ಕಾರ್ಯಗಳನ್ನು ಮುಂದುವರೆಸಿದರು. ಆಮೇಲೆ ಬಂದ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳು, ಬಿದ್ದು ಹೋಗಿದ್ದ ಮಠದ ಕಟ್ಟಡದ ಭಾಗಗಳನ್ನು ಪೂರ್ಣನಿರ್ಮಾಣ ಮಾಡಿಸಿದ್ರು. ಇವರು ಮೈಸೂರಿಗೆ ಹೋಗಿದ್ದಾಗ ಮುಮ್ಮಡಿ ಕೃಷ್ಣರಾಜ ಒಡೆಯರು ಅವರಿಗೆ ಭಕ್ತಿ ಗೌರವಗಳನ್ನು ಸಲ್ಲಿಸಿದರು.
ಅವರ ತರುವಾಯದಲ್ಲಿ ಬಂಡ ಸಾವಳಿಗೆ ಗುರುಶಾಂತ ಸ್ವಾಮಿಗಳು (ಕ್ರಿ. ಶ. ೧೮೩೨) ಶ್ರೀಮಠದ ಹಿಂಭಾದಲ್ಲಿ ಚಿದ್ವಿಲಾಸ ಭವನವನ್ನು ಕಟ್ಟಿಸಿ, ಚಿದ್ವನ (ಚಿದಾರಣ್ಯ) ವನ್ನು ಮಾಡಿಸಿದರು. ಅದೇ ಈಚೆಗೆ 'ಮುರುಘವನ' ವಾಗಿ ವಿಸ್ತಾರಗೊಂಡಿದೆ.
ಅವರ ಉತ್ತರಾಧಿಕಾರಿಯವರು ಸಣ್ಣ ಪಾದದ ಚೆನ್ನವೀರಸ್ವಾಮಿಗಳು ಅವರ ತರುವಾಯ ಬಂದ ಶಿರಸಂಗಿ ಮಹಾಲಿಂಗಸ್ವಾಮಿಗಳು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರಸಾದನಿಲಯವನ್ನು ಪ್ರಾರಂಭಿಸಿದ ಪ್ರಪ್ರಥಮ ಮಠಾಧಿಪತಿಗಳೆಂದು ಹೆಸರಾಗಿದ್ದಾರೆ. ಮುಂದಿನ ಪೀಠಾಧೀಶರಾದ ಹೆಬ್ಬಾಳು ರುದ್ರಸ್ವಾಮಿಗಳು ನಾಡಿಗೆ ಬಂದ ಭೀಕರ ಬರಗಾಲದಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಜನರ ಸಂಕಷ್ಟವನ್ನು ದೂರ ಮಾಡಲು ಪ್ರಯತ್ನಿಸಿದರು. ಅವರಾದ ಮೇಲೆ ಬಂದವರು ಬ್ಯಾಡಗಿ ಮುಪ್ಪಿನ ಸ್ವಾಮಿಗಳು.
ಆ ತರುವಾಯದಲ್ಲಿ ಬಂಡ ಜಯದೇವ ಸ್ವಾಮಿಗಳು ಇತರ ಕೋಮುಗಳು ಸೇರಿದಂತೆ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರಿಗೆ ಊಟ ವಸತಿಗಳು ಅತ್ಯಂತ ಅವಶ್ಯವೆಂದರಿತು ರಾಜ್ಯಾದ್ಯಂತ ಹಾಗೂ ರಾಜ್ಯದಿಂದ ಹೊರಗೆ ಸಹ ಅನೇಕ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಅನೇಕ ಸಮಾಜೋಪಯೋಗಿ ಕೆಲಸಗಳಿಗೆ ಉದರ ದೇಣಿಗೆ ಇತ್ತರು ಕಟ್ಟಡ ಮೊದಲಾದುವುಗಳನ್ನು ಕಟ್ಟಿಸಿದರು. ೧೯೩೭ ರಲ್ಲಿ ಹಾವೇರಿಯಲ್ಲಿದ್ದಾಗ ಇವರ ಹಾಗೂ ಗಾಂಧೀಜಿ ಅವರ ಭೇಟಿಯಾಗಿ ಆ ಅಂತರದಲ್ಲಿ ಅವರು ಖಾದಿ ಬಟ್ಟೆಯ ಕಾವಿ ಧರಿಸತೊಡಗಿದರು. ಹಾಗೆಯೇ ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳನ್ನು ಬೆಂಬಲಿಸಿದರು. ಸುದೀರ್ಘ ಕಾಲ ಕ್ರಿಯಾಶೀಲರಾಗಿ ಶ್ರೀಮಠದ ಕೀರ್ತಿಯನ್ನು ಬೆಳಗಿದರು.
ಅವರ ಉತ್ತರಾಧಿಕಾರಿಯಾಗಿ ಬಂಡ ಜಯವಿಭವ ಸ್ವಾಮಿಗಳು ೧೯೬೨ ರಲ್ಲಿ ಚೀನಾದೇಶ ಭಾರತದ ಮೇಲೆ ಆಕ್ರಮಣ ಮಾಡಿದ ಕಾಲಕ್ಕೆ ರಕ್ಷಣಾನಿಧಿಗೆಂದು ಶ್ರೀಮಠದ ಸ್ವಾಮಿಗಳು ಇದ್ದ ಚಿನ್ನದ ಕಿರೀಟ ಉಂಗುರಗಳು ಮತ್ತು ದೊಡ್ಡ ಮೊತ್ತದ ನಗದು ಇವನ್ನು ನೀಡಿದರು.
ಮುಂದೆ ಅವರ ನಂತರ ಬಂದ ಮಲ್ಲಿಕಾರ್ಜುನ ಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠವನ್ನು ಸ್ಥಾಪಿಸಿ ಅನೇಕ ಶಾಲಾ ಕಾಲೇಜುಗಳು ವೃತ್ತಿ ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಹಾಗು ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದರು. ಶ್ರೀಮಠದ ಪ್ರಕಾಶನವನ್ನು ಪ್ರಾರಂಭಿಸಿ ಅನೇಕ ಗ್ರಂಥಗಳನ್ನು ಪ್ರಕಟಿಸಿದರು. ತ್ರೈಮಾಸಿಕ ಹಾಗು ಇತರ ಪತ್ರಿಕೆಗಳನ್ನು ಪ್ರಾರಂಭಿಸಿದರು. ವಚನ ಸಾಹಿತ್ಯದ ಕೃತಿ ಪ್ರಕಣೆಗೆಂದು ಮೈಸೂರು ವಿಶ್ವವಿದ್ಯಾನಿಲ ಕನ್ನಡ ಸಾಹಿತ್ಯ ಪರಿಷತ್ತು ಇವಕ್ಕೆ ಲಕ್ಷಂತಾರ ತುಪಾಯಿಗಲ್ ದೇಣಿಗೆ ನೀಡಿದಂತೆ ಶೈಕ್ಷಣಿಕ ಮೌಲ್ಯದ ಅನೇಕ ಸಮ್ಮೇಳನಗಳನ್ನು ನಡೆಸಿದರು. ಬೇರೆಕಡೆ ನಡೆಯುತ್ತಿದ್ದ ದಸರಾ ಮಹೋತ್ಸವವನ್ನು ಚಿತ್ರದುರ್ಗದಲ್ಲೇ ನಡೆಯುವಂತೆ ಮಾಡಿದರು.
ಅವರ ತುವೆಯ ಪೀಠಕ್ಕೆ ಬಂದವರು ಶ್ರೀ ಶಿವಮೂರ್ತಿ ಸ್ವಾಮಿಗಳು ಶರಣ ತತ್ತ್ವಾದರ್ಶಗಳಿಗೆ ಮನಸೋತ ಇವರು ಜಗದ್ಗುರು ಉಪಾಧಿಯನ್ನು ತೊರೆದು ತಮ್ಮನ್ನು ಶರಣರು ಎಂದು ಕರೆದುಕೊಂಡಿದ್ದಾರೆ. ಅಡ್ಡಪಲ್ಲಕ್ಕಿ ಚಿನ್ನದ ಕಿರೀಟ, ಬೆಳ್ಳಿಯ ಸಿಂಹಾಸನ ಇವನ್ನು ಬಿಟ್ಟು ಸಮಾಜ ಸುಧಾರಣೆ, ನವಜಾಗೃತಿಯ ಸಂದೇಶ ನೀಡುವ ಹಲವು ರೂಪಕಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ.
ಎಲ್ಲಾ ಜಾತಿಯ ಜನರಿಗೆ ಪ್ರತಿತಿಂಗಳು ಬಹು ಸಂಖ್ಯೆಯಲ್ಲಿ ಉಚಿತ ಸರಳ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ನೆರವಾಗಿದ್ದಾರೆ. ವಿವಿಧ ಜಾತಿಯ ಜನರ ಕೋರಿಕೆಯಂತೆ ಅವರ ಜಾತಿಯ ಏಳಿಗೆಯ ಸಲುವಾಗಿ ಲಿಂಗದೀಕ್ಷೆ ನೀಡಿ ಸ್ವಾಮಿಗಳನ್ನು ಮಾಡಿಕೊಟ್ಟು ಮಠ ನಿರ್ಮಿಸಿಕೊಳ್ಳಲು ಶಾಯ ಮಾಡಿದ್ದಾರೆ ಅನೇಕ ಬಾರಿ ವಿದೇಶ ಪ್ರವಾಸ ಮಾಡಿರುವ ಇವರು ವಚನ ಸಾಹಿತ್ಯದ ಅಭ್ಯಾಸಕ್ಕೆ ಉತ್ತೇಜನ ಕೊಡಲು ವಚನಕಮ್ಮಟ ಪರೀಕ್ಷೆ ಗಳನ್ನು ಪ್ರಾಂಭಿಸಿದ್ದಾರೆ. ಬಸವೇಶ್ವರ ವೈದ್ಯಕೀಯ ಕಾಲೇಜು ಇವಲ್ಲದೆ ಬಸವತತ್ತ್ವ ಮಹಾವಿದ್ಯಾಲಯ ಗುರುಕುಲ ಅಲ್ಲಮಪ್ರಭು ಸಂಶೋಧನ ಕೇಂದ್ರಗಳುನ್ನು ಪ್ರಾಂಭಿಸಿದ್ದಾರೆ. ಹಿಂದಿನ ದಸರಾ ಉತ್ಸವಕ್ಕೆ ಶರಣ ಸಂಸ್ಕೃತಿ ಉತ್ಸವ ಎಂದು ಹೆಸರಿಟ್ಟು ಹೊಸರೂಪ ಕೊಟ್ಟಿದ್ದಾರೆ. ಸಮಾಜ ಸುಧಾರಣಾ ಕಾರ್ಯ ವಚನ ಸಾಹಿತ್ಯ ಕುರಿತ ಉತ್ತಮ ಕೃತಿ ಇವುಗಳಿಗಾಗಿ ಬಸವಶ್ರೀ ಎಂಬ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ಥಾಪಿಸಿ ವಿವಿಧ ಗಣ್ಯರಿಗೆ ನೀಡುತ್ತಾ ಬಂದಿದ್ದಾರೆ. ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಶ್ರೀಮಠದ ಉಜ್ಜ್ವಲ ಪರಂಪರೆಯನ್ನು ಹೊಸರೀತಿಯಲ್ಲಿ ಮುಂದುವರಿಸುತ್ತಾ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.



ಬಸವಕೇಂದ್ರ, ಅರಸಿಕೆರೆ     9844073866
ಬಸವಕೇಂದ್ರ, ಅಸೂಟಿ     9731102479, 08381280224
ಬಸವಕೇಂದ್ರ, ಅಥಣಿ     08289251542, 9739330409, 9740466999
ಬಸವಕೇಂದ್ರ, ಇಳಕಲ್     08351270244, 9448139204, 9880804225
ಬಸವಕೇಂದ್ರ,ಉಡುಪಿ     08202522342
ಬಸವಕೇಂದ್ರ, ಔರಾದ್     9900876414, 9880277185
ಬಸವಕೇಂದ್ರ, ಕದ್ರಾ     9448526426
ಬಸವಕೇಂದ್ರ, ಕಿರುಗಾವಲು     9945286103
ಬಸವಕೇಂದ್ರ, ಕೊಪ್ಪಳ     9482151960, 9449090289, 9449847830
ಬಸವಕೇಂದ್ರ, ಕೆಂಕೆರೆ     8453812805, 9886532195
ಬಸವಕೇಂದ್ರ, ಖಜೂರಿ     9916194360, 08477227450
ಬಸವಕೇಂದ್ರ, ಗದಗ     9448115594, 9480132732
ಚಿಕ್ಕನರಗುಂದ, ಗದಗ     9538360596
ಬಸವಕೇಂದ್ರ, ಗಜೇಂದ್ರಗಡ     9980501800, 9886417576, 9886417576
ಬಸವಕೇಂದ್ರ, ಗಂಗಾವತಿ     935474670
ಬಸವಕೇಂದ್ರ, ಗುಲ್ಬರ್ಗ     9880989071, 9900693704, 9448121682
ಬಸವಕೇಂದ್ರ, ಗುಳೆದಗುಡ್ಡ     9449415542, 9448336568, 08357250252
ಬಸವಕೇಂದ್ರ, ಗುರುಮಠಕಲ್     99800008046
ಬಸವಕೇಂದ್ರ, ಚಳ್ಳಕೆರೆ     9845229647, 9845729642
ನಾಗಗೊಂಡನಹಳ್ಳಿ, ಚಳ್ಳಕೆರೆ     9743358906
ಗುಜ್ಜುಗಾನಗಳ್ಳಿ, ಚಳ್ಳಕೆರೆ     8722412330
ಬಸವಕೇಂದ್ರ, ನಾಗಗೊಂಡನಹಳ್ಳಿ, ಚಳ್ಳಕೆರೆ ತಾ.     8748068151
ಬಸವಕೇಂದ್ರ, ಚನ್ನಗಿರಿ     08189-228482, 9481565983
ಬಸವಕೇಂದ್ರ, ಚಿತ್ರದುರ್ಗ     9986375165, 9448393186, 9448232966
ಬಸವಕೇಂದ್ರ, ಚಿಕ್ಕಮಗಳೂರು    9620026504
ಬಸವಕೇಂದ್ರ, ಕಡೂರು ಚಿಕ್ಕಜಾಜೂರು     9449412921
ಬಸವಕೇಂದ್ರ, ಚಿಕ್ಕಜಾಜೂರು     9448028041
ಬಸವಕೇಂದ್ರ, ಜಮಖಂಡಿ     9448335549, 9986271514
ಬಸವಕೇಂದ್ರ, ಜೇವರ್ಗಿ     9980568043
ಬಸವಕೇಂದ್ರ, ತುಮಕೂರು     9343302575, 9972098735
ಬಸವಕೇಂದ್ರ, ಲಿಂಗೀಕಟ್ಟೆ, ತುಮಕೂರು    8762470296, 9449939016
ಬಸವಕೇಂದ್ರ, ತಿಪಟೂರು     08134251070, 9844091823
ಬಸವಕೇಂದ್ರ, ದಾವಣಗೆರೆ     9945572979, 9844077790, 9844584855
ಗುಮ್ಮನೂರು, ದಾವಣಗೆರೆ     9741924526
ಹೂವಿನಮಡು, ದಾವಣಗೆರೆ     9880914504
ಬಸವಕೇಂದ್ರ, ಧಾರವಾಡ     9620618040, 9448367775
ಬಸವಕೇಂದ್ರ, ದಾಂಡೇಲಿ     9448766116
ಬಸವಕೇಂದ್ರ, ದೇವದುರ್ಗ     9742646981, 9448214628
ಬಸವಕೇಂದ್ರ, ನರಗುಂದ     9448127975
ಬಸವಕೇಂದ್ರ, ನವಲಗುಂದ     9448641617
ಬಸವಕೇಂದ್ರ, ನಾಯಕನಹಟ್ಟಿ    9845405541
ಬಸವಕೇಂದ್ರ, ನಿಡಸೋಸಿ     9448271600, 9901136744, 08333-278633
ಬಸವಕೇಂದ್ರ, ನಿಪ್ಪಾಣಿ     9480336339
ಬಸವಕೇಂದ್ರ, ಬಸವಕಲ್ಯಾಣ     9739106045, 9741460888
ಬಸವಕೇಂದ್ರ,ಶಿರಸಂಗಿ     9902154404
ಬಸವಕೇಂದ್ರ, ಬಳ್ಳಾರಿ     9844203441, 9663284555
ಬಸವಕೇಂದ್ರ, ಬಿಜಾಪುರ     9448035775
ಬಸವಕೇಂದ್ರ, ಬೀದರ್     9986792323, 9341120446
ಬಸವಕೇಂದ್ರ, ಬೀರೂರು     08267-255655
ಬಸವಕೇಂದ್ರ, ಬೆಂಗಳೂರು     9902788107
ಬಸವಕೇಂದ್ರ, ಹೆಳವ ಗುರುಪೀಠ, ಬೆಂಗಳೂರು     9448294108
ಬಸವಕೇಂದ್ರ, ಬೆಳಗಾಂ     9845348511
ಬಸವಕೇಂದ್ರ, ಬೇಳೂರು (ಕೊಡಗು)    08276-282047, 8722838773
ಬಸವಕೇಂದ್ರ, ಬ್ಯಾಡಗಿ     9449410176
ಬಸವಕೇಂದ್ರ, ಭದ್ರಾವತಿ     08282-267039
ಬಸವಕೇಂದ್ರ, ಭಾಲ್ಕಿ     9449050498, 7411513336
ಬಸವಕೇಂದ್ರ, ಮಾನ್ವಿ     9448221717, 984599313
ಬಸವಕೇಂದ್ರ, ಮಂಡ್ಯ     9945651857, 9448101147
ಬಸವಕೇಂದ್ರ, ಮೈಸೂರು     9880897237, 9945901159
ಬಸವಕೇಂದ್ರ, ರಾಯಚೂರು     9886928072, 9972998530
ಬಸವಕೇಂದ್ರ, ರಾಣಿಬೆನ್ನೂರು, ಮಹಿಳೆ     9448867703, 9902231535
ಬಸವಕೇಂದ್ರ, ರಾವಂದೂರು     9844863153
ಬಸವಕೇಂದ್ರ, ಲಿಂಗಸಗೂರು     08537-257664
ಬಸವಕೇಂದ್ರ, ಶಿಕಾರಿಪುರ     9900844022
ಬಸವಕೇಂದ್ರ, ಶಿರ್ಶಿ     9740231000
ಬಸವಕೇಂದ್ರ, ಶಿವಮೊಗ್ಗ     8095421985, 08182-221108
ಬಸವಕೇಂದ್ರ, ಸಿಂಧನೂರು     9845034573
ಬಸವಕೇಂದ್ರ, ಸೇಡಂ     9449618968, 9449618960
ಬಸವಕೇಂದ್ರ, ಸೋಲೂರು    9945525860, 9845820297
ಬಸವಕೇಂದ್ರ, ಹಳಿಯಾಳ     9880271356
ಬಸವಕೇಂದ್ರ, ಹಾವೇರಿ     9901410181, 9980758123
ಬಸವಕೇಂದ್ರ, ಹಾಸನ     9980140476, 7676865229
ಬಸವಕೇಂದ್ರ, ಹುಲಸೂರು     9449644283
ಬಸವಕೇಂದ್ರ, ಹುಮ್ನಾಬಾದ್     9448604351, 9741223789
ಬಸವಕೇಂದ್ರ, ಹುಬ್ಬಳಿ     9498115594, 9448359411, 94481115594
ಮಹಿಳಾ ಬಸವಕೇಂದ್ರ, ಶಿರಸಿ     8105752282
ಬಸವಕೇಂದ್ರ, ಹಿರಿಯೂರು     9449855086
ಬಸವಕೇಂದ್ರ, ಹೂವಿನಹಡಗಲಿ     9448717205
ಬಸವಕೇಂದ್ರ, ಹೊಸದುರ್ಗ     9880341015
ಬಸವಕೇಂದ್ರ, ಹೈದರಾಬಾದ್     09441223546
ಬಸವಕೇಂದ್ರ, ನೀರ್ಣಾ, ಹುಮ್ನಾಬಾದ್ ತಾ.    9379755111
ಬಸವಕೇಂದ್ರ, ಮುತ್ತಂಗಿ, ಹುಮ್ನಾಬಾದ್ ತಾ.     9740484478
ಬಸವಕೇಂದ್ರ, ಹಲಬರ್ಗಾ ಬೀದರ್     9480463207, 9972897076
ಬಸವಕೇಂದ್ರ,ಸನಾಳ (ಜಮಖಂಡಿ)     083532221820
ಬಸವಕೇಂದ್ರ, ಕುಂಬರಹಳ್ಳಿ (ಜಮಖಂಡಿ)     083532221626
ಬಸವಕೇಂದ್ರ,ಕೆ.ಆರ್. ನಗರ     9901643456
ಬಸವಕೇಂದ್ರ,ಸಿದ್ದಯ್ಯನ ಕೋಟೆ     9448673980
ಬಸವಕೇಂದ್ರ,ಕಡೂರು (ಚಿಕ್ಕಜಾಜೂರು)     9448028041, 9945764010
ಬಸವಕೇಂದ್ರ,ನಾಗರಹಳ್ಳಿ ಸಿಂಧಗಿ ತಾ     9972298257
ಬಸವಕೇಂದ್ರ, ಎನ್. ಆರ್. ಪುರ     9686283302, 7795193013
ಬಸವಕೇಂದ್ರ,ಕುರಕುಂದ (ಸಿಂಧನೂರ ತಾ)     9686418302, 9844568883
ಬಸವಕೇಂದ್ರ, ಮನ್ನಾಎಖೇಳ್ಳಿ     9916759172, 9972698389
ಬಸವಕೇಂದ್ರ,ಮನ್ನಳ್ಳಿ     9448582901
ಬಸವಕೇಂದ್ರ, ಸಾಯಿಂಗಾಂವ     9449744581
ಬಸವಕೇಂದ್ರ, ಗುಮ್ಮನೂರು     9538867086
ಬಸವಕೇಂದ್ರ, ಶಿರಗುಪ್ಪ     9886354089
ಬಸವಕೇಂದ್ರ, ಅಬ್ಬೇನಹಳ್ಳಿ     9880028308, 9945197618
ಬಸವಕೇಂದ್ರ, ಬಿಳಿಚೋಡು     9731005899
ಬಸವಕೇಂದ್ರ, ಶ್ರೀ ವಣಕಲ್ಲು ಮಲ್ಲೇಶ್ವರ ಮಹಾಸುಕ್ಷೇತ್ರ, ನೆಲಮಂಗಲ     87620-04466
ಬಸವಕೇಂದ್ರ, ಮಳವಳ್ಳಿ     9900979735
ಬಸವಕೇಂದ್ರ, ಸಿ ನಂದಿಹಳ್ಳಿ     9481490693
ಬಸವಕೇಂದ್ರ, ಸಿರಗುಪ್ಪ     9902857173, 9916064395
ಬಸವಕೇಂದ್ರ, ತೊಂಡೂರು     7353957345
ಬಸವಕೇಂದ್ರ, ಕವಲೆತ್ತು     9980292055, 9483658214

ನವಗ್ರಹ ಪಂಚಾಂಗಗಳೂ ವೈಚಾರಿಕತೆಯೂ

ಭಾರತೀಯ ಕಲ್ಪನೆಯ ೯ಗ್ರಹಗಲ್ಲಿ ಸೂರ್ಯ ನಕ್ಷೆತ್ರ: ಚಂದ್ರ ಉಪಗ್ರಹ, ರಾಹು ಕೇತುಗಳು ಗ್ರಹಪಥವೆಂಬ ಕಲ್ಪನೆಯಲ್ಲಿನ ಕಲ್ಪಿತ ಬಿಂದುಗಳು. ಉಳಿದ ಗ್ರಹಳು ಐದಾದರೂ ವಿಶ್ವದಲ್ಲಿ ಅಸಂಖ್ಯಾತವಾಗಿ ಊಹಿಸಲೂ ಅಗದಷ್ಟು ಅನಂತ ಸಂಖ್ಯೆಯಲ್ಲಿ ನಕ್ಷತ್ರಗಳು ಗ್ರಹಗಳು, ಉಪಗ್ರಹಗಳೂ ಇವೆ ಅವುಗಳನ್ನು ಪರಿಗಣಿಸದೆ ೯ ಗ್ರಹಗಳಿಗೆ ಆಗು ಹೋಗುಗಳ ಕಾರಣವನ್ನು ಕಟ್ಟುವುದು ಪರಮ ಮೂಢನಂಬಿಕೆ. ಒಂದು ರಾಶಿಯಲ್ಲಿ ಗ್ರಹಗಳು ಕೂಡುವ ಕಲ್ಪನೆಯು ನಗೆಪಾಡು ಕಾಣುವ ಮಂಗಳ, ಬುಧ, ಗುರು, ಶುಕ್ರ, ಶನಿಗಳು ಬೇರೆ ಬೇರೆ ದೂರಗಳಲ್ಲಿ ಮಟ್ಟಗಳಲ್ಲಿ ಸೂರ್ಯನನ್ನು ಸುತ್ತುತ್ತಿವೆ. ಕಾಲಸೂಚಕವಾದ ಗ್ರಹಗಳು ತಮಗೆ ತಾವೇ ಏನನ್ನೂ ನೀಡದ ಬಲವುಳ್ಳದ್ದನ್ನು ಸತತ ಸುತ್ತುವ ಪ್ರಕೃತಿಯ ಬಯಲ ಹೆಬ್ಬುರುಡೆಗಳು. ಕಾಲವೆಂಬುದು ಬೆಳಕು-ಕತ್ತಲೆಯ ನಿಲುವಿನ ಕಲ್ಪಿತವೆ. ಭಾರತದಲ್ಲಿ ಹಗಲಾಗಿದ್ದಾಗ ಅಮೇರಿಕಾದಲ್ಲಿ ರಾತ್ರಿ ಜಗತ್ತನ್ನು ರಾಜಕಾರಣಿಗಳು ರಾಜಕಾರಣಿಗಳನ್ನು ಜ್ಯೋತಿಷಿಗಳು ಧೂರ್ತತೆಯಿಂದ ಅಳುತ್ತಿರುವುದೇ ಜಗತ್ತಿನ ಎಲ್ಲಾ ಗ್ರಹಚಾರ ಅನಿಶ್ಚಿವಾಗಿದೆ. ಭಾರತದಲ್ಲಿ ಒಂದಕೊಂದು ಹೊಂದದಿರುವ ಐವತ್ತಕ್ಕೂ ಮೇಲ್ಪಟ್ಟು ಪಂಚಾಂಗಗಳಿವೆ ಜ್ಯೋತಿಷ್ಯದ ಮೂಢ ನಂಬಿಕೆಯಾದ ಗ್ರಹಬಲ ಸಾಕು ಬಸವ ಗುರುವಿನ ಸದ್ಬೋಧೆಯ ಅನುಗ್ರಹಬಲ ಬೇಕು ಒಳಿತಾಗಿ ಬಳಸಿದ ಕಾಲವೇ ಲಗ್ನ-ಶುಭಕಾಲ ಕೇಡಿಗಾಗಿ ಬಳಸಿದ ಕಾಲವೇ ವಿಘ್ನ-ಅಶುಭ ಕಾಲ ವ್ಯವಹಾರಕ್ಕಾಗಿ ಒಂದಲ್ಲೊಂದು ಘಟನೆಯ ಮುಂದಿನ ಎಣಿಕೆಯೇ ಶಕ ವರ್ಷ. ಹಿಂದಿನ ಎಣಿಕೆಯೇ ಗತವರ್ಷ ಹಿಂದಿನದನ್ನು ತಿಳಿದು ಇಂದಿನದನ್ನು ವಿವೇಚಿಸಿ ಯೋನೆಗೈದುದೇ ತ್ರಿಕಾಲ ಜ್ಞಾನಿಗಳೂ, ದೇವರು, ಋಷಿಗಳೂ ಬಸವರೇ ಆಗಿದ್ದಾರೆ

ಜ.ಮು. ರಾ ಸಂಸ್ಥೆಯ ಕೆಲವು ದೂರವಾಣಿಗಳು

ಎಸ್.ಜೆ.ಎಂ. ಮಠ, ಚಿತ್ರದುರ್ಗ     08194-222250
ಎಸ್.ಜೆ.ಎಂ. ಮಠ ಪ್ಯಾಕ್ಸ್, ಚಿತ್ರದುರ್ಗ     08194-225164
ಎಸ್.ಜೆ.ಎಂ. ವಿದ್ಯಾಪೀಠ, ಚಿತ್ರದುರ್ಗ     08194-222422, 223083
ಬಸವತತ್ವ ಮಹಾವಿದ್ಯಾಲಯ     9448656601, 08194-223355
ಬಸವೇಶ್ವರ ಮೆಡಿಕಲ್ ಕಾಲೇಜು, ಚಿತ್ರದುರ್ಗ     08194-227937, 226564
ಬಸವೇಶ್ವರ ಆಸ್ಪತ್ರೆ, ಚಿತ್ರದುರ್ಗ     08194-222054, 227642
ಬಸವೇಶ್ವರ ಮೆಡಿಕಲ್ ಕಾಲೇಜು, ಹಾಸ್ಟೆಲ್     08194-220460
ಎಸ್.ಜೆ.ಎಂ. ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿತ್ರದುರ್ಗ     08194-22866
ಎಸ್.ಜೆ.ಎಂ. ಡೆಂಟಲ್ ಕಾಲೇಜು, ಚಿತ್ರದುರ್ಗ     08194-23068
ಎಸ್.ಜೆ.ಎಂ. ಕಾಲೇಜ್ ಆಫ್ ಫಾರ್ಮಸಿ, ಚಿತ್ರದುರ್ಗ     08194-223231
ಎಸ್.ಜೆ.ಎಂ. ಪಾಲಿಟೆಕ್ನಿಕ್, ಚಿತ್ರದುರ್ಗ     08194-223073
ಎಸ್.ಜೆ.ಎಂ. ಐ. ಟಿ. ಹಾಸ್ಟೆಲ್, ಚಿತ್ರದುರ್ಗ     08194-222180
ಎಸ್.ಜೆ.ಎಂ. ಡೆಂಟಲ್ ಕಾಲೇಜು ಹಾಸ್ಟೆಲ್, ಚಿತ್ರದುರ್ಗ     08194-222893
ಎಸ್.ಜೆ.ಎಂ. ಮಹಿಳಾ ಹಾಸ್ಟೆಲ್, ಚಿತ್ರದುರ್ಗ     08194-223096
ಎಸ್.ಜೆ.ಎಂ. ವೀರಶೈವ ವಿದ್ಯಾರ್ಥಿ ನಿಲಯ, ಚಿತ್ರದುರ್ಗ     08194-224061
ಎಸ್.ಜೆ.ಎಂ.ಕಾಲೇಜು (ಚಂದ್ರಹಳ್ಳಿ), ಚಿತ್ರದುರ್ಗ     08194-222506
ಎಸ್.ಜೆ.ಎಂ.ಕಾಲೇಜು (ಚಂದ್ರಹಳ್ಳಿ), ಚಿತ್ರದುರ್ಗ ಪ್ಯಾಕ್ಸ್     08194-222444
ಎಸ್.ಜೆ.ಎಂ. ಮಹಿಳಾ ಕಾಲೇಜು, ಚಿತ್ರದುರ್ಗ     08194-223054
ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜು, ಚಿತ್ರದುರ್ಗ     08194-225824
ಎಸ್.ಜೆ.ಎಂ. ಸ್ಕೂಲ್ ಆಫ್ ನರ್ಸಿಂಗ್, ಚಿತ್ರದುರ್ಗ    08194-220034
ಎಸ್.ಜೆ.ಎಂ. ಕಾನೂನು ಕಾಲೇಜು, ಚಿತ್ರದುರ್ಗ     08194-226811
ಎಸ್.ಜೆ.ಎಂ. ಇಂಗ್ಲೀಷ್ ಸ್ಕೂಲ್, ಚಿತ್ರದುರ್ಗ     08194-220044
ಎಸ್.ಜೆ.ಎಂ. ಐ.ಟಿ.ಐ. ಚಿತ್ರದುರ್ಗ     08194-228663
ಎಸ್.ಜೆ.ಎಂ. ವಚನಕಮ್ಮಟ, ಚಿತ್ರದುರ್ಗ     9448566362, 9844292635
ಎಸ್.ಜೆ.ಎಂ. ನರ್ಸರಿ (ಸಸ್ಯ ಶಾಲೆ)     08194-222250
ಶ್ರೀ ಬೃಹನ್ಮಠ ಪ. ಪೂ. ಕಾಲೇಜು, ಚಿತ್ರದುರ್ಗ (ಎಸ್.ಜೆ.ಎಂ.ಐ.ಟಿ. ಕ್ಯಾಂಪಾಸ್)     08194-220034
ಎಸ್.ಜೆ.ಎಂ, ಪ. ಪೂ. ಕಾಲೇಜು, ಚಂದ್ರಹಳ್ಳಿ, ಚಿತ್ರದುರ್ಗ     08194-222104
ಎಸ್.ಜೆ.ಎಂ. ಚಿತ್ರಕಲಾ ಶಾಲೆ , ಚಿತ್ರದುರ್ಗ     08194-223170
ಶ್ರೀ ಬೃಹನ್ಮಠ ಪ.ಪೂ. ಕಾಲೇಜು ಚಿತ್ರದುರ್ಗ     08194-223013
ಶ್ರೀ ಬೃಹನ್ಮಠ ಪ್ರೌಢಶಾಲೆ, ಚಿತ್ರದುರ್ಗ     08194-227865
ಎಸ್.ಜೆ.ಎಂ. ಬ್ಯಾಂಕ್, ಚಿತ್ರದುರ್ಗ     08194-228987, 223115
ಎಸ್.ಜೆ.ಎಂ. ಕಾಲೇಜು, ತರೀಕೆರೆ     08261-222330
ಎಸ್.ಜೆ.ಎಂ. ಪ.ಪೂ. ಕಾಲೇಜು, ಭರಮಸಾಗರ     08194-258425
ಎಸ್.ಜೆ.ಎಂ. ಪಾಲಿಟೆಕ್ನಿಕ್, ಚಳ್ಳಕೆರೆ     08195-222516
ಎಸ್.ಜೆ.ಎಂ. ಬಾಲಿಕ ಪ್ರೌಢಶಾಲೆ, ಸೋಮವಾರಪೇಟೆ     08276-282307
ಎಸ್.ಜೆ.ಎಂ. ಕಾಲೇಜು, ಹೊಳಲ್ಕೆರೆ     08191-275315
ಎಸ್.ಜೆ.ಎಂ. ಮಹಾಲಕ್ಷ್ಮೀ ಕಾಲೇಜು, ಧಾರವಾಡ     0836-243477
ಎಸ್.ಜೆ.ಎಂ. ಜಯದೇವ ವಿದ್ಯಾರ್ಥಿ ನಿಲಯ, ತುಮಕೂರು     0816-2273882
ಎಸ್.ಜೆ.ಎಂ. ಭಾರತಮತ ಶಾಲೆ, ತುಮಕೂರು     0816-2270259
ಎಸ್.ಜೆ.ಎಂ. ವಿದ್ಯಾವಾಹಿನಿ ಜೂ. ಕಾ. ಕ್ಯಾತ್ಸಂದ್ರ     0816-2282946
ಎಸ್.ಜೆ.ಎಂ. ಪಿ.ಯು. ಕಾಲೇಜು, ಹಾವೇರಿ     08375-236714
ಎಸ್.ಜೆ.ಎಂ. ಮಹಿಳಾ ಕಾಲೇಜು, ರಾಣೀಬೆನ್ನೂರು    08267-255874
ಎಸ್.ಜೆ.ಎಂ. ಪಾಲಿಟೆಕ್ನಿಕ್, ಬೀರೂರು     08267-255874br/> ಜಮುರಾ ಕಲಾಲೋಕ     9448232966
ಎಸ್.ಜೆ.ಎಂ. ಪಬ್ಲಿಕ್ ಸ್ಕೂಲ್, ಎಂ.ಸಿ.ಸಿ, ಎ-ಬ್ಲಾಕ್, ದಾವಣಗೆರೆ     08192-222663
ಎಸ್.ಜೆ.ಎಂ. ಇಂಗ್ಲೀಷ್ ಸ್ಕೂಲ್, ದಾವಣಗೆರೆ     08192-237722
ಪ್ರಿಯದರ್ಶಿನಿ ಬಾಲಿಕ ಪ್ರೌಢಶಾಲೆ, ಚಿತ್ರದುರ್ಗ     9986531084

See Institutions